ಕನ್ನಡರಾಜ್ಯೋತ್ಸವ ಸಮಾರಂಭದ ಟಿಪ್ಪಣಿ -2023

68ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಹೆಮ್ಮೆ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮವು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಿದ ಸುವರ್ಣ ವರ್ಷಾಚರಣೆಯಸಂಕೇತವೂ ಆಗಿತ್ತು. ಡಾ. ಶ್ರೀಕಾಂತ ಕುಲಕರ್ಣಿ ವೈದ್ಯಕೀಯ ಅಧೀಕ್ಷಕರು,
ಡಾ. ನಿಶ್ಚಲ್ವೈದ್ಯಕೀಯ ಉಪ-ಅಧೀಕ್ಷಕರುಮತ್ತು ಡಾ. ಓಂಪ್ರಕಾಶ್ ಆಡಳಿತ ವೈದ್ಯಾಧಿಕಾರಿಗಳ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು.

ನಮ್ಮ ಸಹ ಪ್ರಾಧ್ಯಾಪಕರಾದ ಡಾ. ರೋಹಿತ್ ಎಚ್. ಆರ್. ಸ್ವಾಗತ ಗೀತೆಯನ್ನುಹಾಡಿದರು. ನಮ್ಮ ವಿಭಾಗದ ಮುಖ್ಯಸ್ಥರಾದ ಡಾ.ರಮೇಶ್.ಎಂ, ಇಲಾಖೆಯನ್ನು ಸ್ಥಾಪಿಸಿದ ಸಮಯದಿಂದ ಇಂದಿನವರೆಗೆ ಮತ್ತು ಅದರ ಸಾಧನೆಗಳನ್ನು ಮೆಲುಕು ಹಾಕುತ್ತಾ, ನಮ್ಮನ್ನು ನೆನಪಿನಂಗಳಕ್ಕೆ ಕರೆದೊಯ್ದರು. ನಂತರ ‘ಕನ್ನಡಭಾಷೆ, ನೆಲ ಮತ್ತು ಸಂಸ್ಕೃತಿಯ ಅನನ್ಯತೆ’ ಎಂಬ ವಿಷಯದ ಕುರಿತು ಸಹಾಯಕ ಪ್ರಾಧ್ಯಾಪಕರಾದ
ಡಾ.ಆಶಿಶ್ ಎಸ್.ಮಲ್ಲಿಗೆ ಇವರು ಮಾತನಾಡಿದರು.

ಸಹಪ್ರಾಧ್ಯಾಪಕರಾದ ಡಾ. ರೋಹಿತ್ಎಚ್. ಆರ್. ಮತ್ತು ಕಿರಿಯನಿವಾಸಿ ವೈದ್ಯರಾದ ಡಾ. ಸಂಜನಾ ಇವರುಗಳು ಕನ್ನಡದ ಸುಮಧುರ ಗೀತೆಗಳನ್ನು ಹಾಡಿದರು. ಪ್ರಸಿದ್ಧ ಕನ್ನಡ ಚಲನ ಚಿತ್ರ ಸಂಭಾಷಣೆಗಳನ್ನು ಶ್ರೀ ಶಶಿಕಾಂತ ಪೈ ಅವರು   ಪ್ರಸ್ತುತ ಪಡಿಸಿದರು.
ನಂತರ ಪುರಂದರದಾಸರ ಒಂದು ರಚನೆಗೆ, ಕುಮಾರಿ ಡಾ. ಸಿರಿಶ್ರೀ ಮತ್ತು ಕುಮಾರಿಲಕ್ಷ್ಮಿ ಅವರಿಂದ ಭರತನಾಟ್ಯ ಪ್ರದರ್ಶನಆಯಿತು.

ಇಲಾಖೆಯ ಡಾ. ಮಾನಸಿ ಕುಮಾರ್ ಅವರು ವಂದನಾರ್ಪಣೆ ಸಲ್ಲಿಸಿದರು.